Handsome boy from Bengaluru

Articles from Shiva Shankar R. Shetty

Wednesday, April 24, 2013

ಹೀಗೂ ಉಂಟೆ..?




ಹೀಗೂ ಉಂಟೆ..?
(ನಾರಾಯಣ ಸ್ವಾಮೀ.. ಎರಡು ಕೈಗಳನ್ನು ಅಕ್ಕ ಪಕ್ಕ ಇಟ್ಟುಕೊಂಡು, ಒಳ್ಳೆ (ಮೂಲವ್ಯಾಧಿ ಪೇಶಂಟ್ ತರಹ) ಮುಲುಗುತ್ತಾ, ಮುಕ್ಕುತ್ತಾ ಡೈಲಾಗ್ ಹೇಳ್ತಾ ಇದ್ದಾನೆ..)

ತಲೆ ಕೂದಲು ಉದುರುವ ರಹಸ್ಯವೇನು? ತಲೆ ಕೂದಲು ಯಾಕಾಗಿ ಉದುರುತ್ತೆ? ಅದರ ಹಿಂದಿರುವ ರಹಸ್ಯವೇನು? ತಲೆ ಕೂದಲು ಉದುರುವ ಹಿಂದೆ ಯಾರ ಯಾರ ಕೈವಾಡ ಇದೆ.. ತಿಳಿದು ಕೊಳ್ಳುವ ಕುತೂಹಲವೇ.. ನೋಡಿ.. ಹೀಗೂ ಉಂಟೆ.. !!

( Tv  ಯಲ್ಲಿ ಹೀಗೂ ಉಂಟೆ ಕಾರ್ಯಕ್ರಮದ ಲೋಗೋ ಪ್ರಸಾರ ಆಗುತ್ತೆ)

(ಪುನಃ ನಾರಾಯಣ ಸ್ವಾಮೀ ಮೂಲವ್ಯಾಧಿ ಪೇಶಂಟ್ ತರಹ ಮುಲುಗುತ್ತಾ...ಮುಕ್ಕುತ್ತಾ..)

 photho  ದಲ್ಲಿರುವ ವ್ಯಕ್ತಿ ಯಾರು ಗೊತ್ತೆ? ಅವನ ಹೆಸರೇನು ಗೊತ್ತೆ? ಚಂ..... ಜಿ. ಚಂ.... ಅಂತ. ಮಾಡುವ ಕೆಲಸ ಏನು ಗೊತ್ತೆ? ಈತ ಮಾಡುವ ಕೆಲಸ ಎನು ಅಂತ ಹೇಳ್ತೀವಿ..

ಈತ... 2005  ರಲ್ಲಿ  Chartered Accountant  ಕೋರ್ಸಿಗೆ ಸೇರಿಕೊಂಡ.. ನೀವೇ ನೋಡ್ತಾ ಇದ್ದೀರಲ್ಲಾ? ಹೇಗೆ ಇತ್ತು.. ಇವನ ತಲೆಗೂದಲು. ತಲೆ ತುಂಬಾ ಜೊಂಪೆ ಜೊಂಪೆ ಕೂದಲು.. ನೋಡ್ತಾ ಇದ್ದರೆ ನೋಡುವವರಿಗೆ ಅಸೂಯೆ ಆಗ್ತಾ ಇತ್ತು. ಆದ್ರೆ.. ಈಗ ಹೇಗಿದೆ.. ನೀವೇ ನೋಡ್ತಾ ಇದ್ದೀರಲ್ಲಾ.. ಇದು ಹೇಗಾಯ್ತು.. ಯಾಕಾಯ್ತು.. ಯಾರಿಂದ ಆಯ್ತು. ತಿಳಿದು ಕೊಳ್ಳ ಬೇಕೆ.. ನೋಡಿ ಹೀಗೂ ಉಂಟೆ... ಬ್ರೇಕ್‍ನ ನಂತರ.

 10 ನಿಮಿಷಗಳ ಬ್ರೇಕ್‍ನ ನಂತರ...
ಡಾಕ್ಟರ್ ವೇಷದಲ್ಲಿ, ಕೈಯಲ್ಲಿ ಸ್ಕೆತಾಸ್ಕೋಪ್ ಅಲ್ಲಾಡಿದುತ್ತಾ.. ಮಿಸ್. ಸಬೀನಾ... ಪ್ರತ್ಯಕ್ಷ...
"ವೀಕ್ಷಕರೇ.. ನೀವೇ ನೋಡ್ತಾ ಇದ್ದೀರಲ್ಲಾ..  2005 ರಲ್ಲಿ ತಲೆ ತುಂಬಾ ಕೂದಲು ಇದ್ದ ವ್ಯಕ್ತಿಯ ತಲೆಯಲ್ಲಿ ಈಗ ಇರುವ ಕೂದಲು ಎಷ್ಟು (ಸ್ಕೆತಾಸ್ಕೋಪ್ ಅಲ್ಲಾಡಿಸುತ್ತಾ).. ಎಲ್ಲಿ ಹೋಯ್ತು.. ತಲೆ ಕೂದಲು.. ವೀಕ್ಷಕರೇ.. ಆಶ್ಚರ್ಯ ಆಗ್ತಾ ಇದೆಯಲ್ಲಾ.. ? ಎಲ್ಲವನ್ನು ತಿಳಿದುಕೊಳ್ಳ ಬೇಕಾ.. ನೋಡಿ .. ಹೀಗೂ ಉಂಟೆ..!!

(ಪುನಃ ನಾರಾಯಣ ಸ್ವಾಮೀ .. ಮುಲುಗುತ್ತಾ...ಮುಕ್ಕುತ್ತಾ..)
ಈತನ ತಲೆ ಕೂದಲು ಹೇಗೆ ಬೋಳಾಯ್ತು.. ತಿಳಿದುಕೊಳ್ಳ ಬೇಕೆಂತ ನೀವೆಲ್ಲಾ ಎಷ್ಟು ಕಾತರದಿಂದ ಕಾಯ್ತಾ ಇದ್ದೀರಂತಾ ನಮಗೆ ಚೆನ್ನಾಗಿ ಗೊತ್ತು.. ಬನ್ನಿ . ಅದೇ ವಿಷಯದ ಬಗ್ಗೆ ಹೇಳ್ತಾ ಇದ್ದಿವಿ.

ಈತ  2005  ರಲ್ಲಿ  Chartered Accountant course ಗೆ  join  ಅಗಿದ್ದ. ಮತ್ತೆ  2007 ರಲ್ಲಿ  inter pass ಆದ. ನಂತರ  Article Ship  ಗೆ ಸೇರಿದ. ನಿಮಗೆ ಈ  Articleship  ಅಂದ್ರೆ ಏನಂತ ಗೊತ್ತಿಲ್ಲವಲ್ಲ. ನಾವು ಈಗ ಅದನ್ನೇ ಹೇಳ್ತಿವಿ ವೀಕ್ಷಕರೇ. ಅದು ಈ ಬ್ರೇಕ್‍ನ ನಂತರ. ನೋಡ್ತಾ ಇರಿ ..  Tv9

[( 10  ನಿಮಿಷಗಳ ಕಾಲ ಬೋಳು ತಲೆ ಮೇಲೆ ಕೂದಲು ಬರಿಸೊ  Adds ) ನಂತರ ಮತ್ತೆ ನಮ್ಮ ನಾರಾಯಣ ಸ್ವಾಮೀ ಮುಲುಗುತ್ತಾ, ಮುಕ್ಕುತ್ತಾ ತೆರೆ ಮೇಲೆ ಬರುತ್ತಾನೆ. ]

 Articleship  ಅಂದ್ರೆ ಅದು  3  ವರ್ಷಗಳ ಕಾಲ ಟ್ರೈನಿಂಗ್. ಹಾಗಂತ ಟ್ರೈನಿಂಗ್ ಯಾರತ್ರ? ಯಾರಂದ್ರೆ ಅವರತ್ರ ಅಲ್ಲ. ಅದೂ  practice  ಮಾಡ್ತಾ ಇರೋ  Chartered Accountat  ಹತ್ರ. ಅದೂ ಎಂಥ ಟ್ರೈನಿಂಗ್? ಬೆಳಿಗ್ಗೆಯಿಂದ ರಾತ್ರಿವರೆಗೂ ಕತ್ತೆ ತರಹ ದುಡಿತ. ಸಂಬಳ ಕೊಡೊಲ್ಲ. ಆದ್ರೆ  stipend  ಅಂತ ಕೊಡ್ತಾರೆ. ಮೊದಲನೇ ವರ್ಷ  3,000/- , ಎರಡನೇ ವರ್ಷ  4,000-  ಮತ್ತು ಮೂರನೇ ವರ್ಷ  5,000/- . ನೀವೇ ಹೇಳಿ.. ಈ ದುಬಾರಿ ಪ್ರಪಂಚದಲ್ಲಿ ಬೆಂಗಳೂರಿನಂಥ ಸಿಟಿನಲ್ಲಿ  3,000/- 4,000/- and 5,000/-  ಯಾವ ಮೂಲೆಗೆ .. ನೀವೇ ಹೇಳಿ..?

ಈಗಿನ  CA ಗಳು ಕೆಲ್ಸಕ್ಕೆ ಸೇರಿದ ತಕ್ಷಣ, ಕೈಗೊಂಡು  laptop  ಕೊಟ್ಬಿಡ್ತಾರೆ. ಆಮೇಲೆ ನಿಮಗೇ ಗೊತ್ತು. ಆಫ಼ೀಸ್‍ನಲ್ಲೂ ಕೆಲ್ಸ, ಮನೆನಲ್ಲೂ ಕೆಲ್ಸ, ಬಸ್‍ಸ್ಟಾಪ್‍ನಲ್ಲಿ ಬಸ್‍ಗೆ ಕಾಯೋವಾಗ್ಲೂ ಕೆಲ್ಸ ಮಾಡ್ಬೇಕು. ರಾತ್ರಿ ಮನೆನಲ್ಲಿ ಮಲಗಿದಾಗ್ಲೂ ಕೆಲ್ಸದ್ದೇ ಚಿಂತೆ. ಬೆಳಿಗ್ಗೆ ಎದ್ದ ಕೂಡ್ಲೇ ಹೋಗೋ ಟಾಯ್ಲೆಟ್‍ನಲ್ಲೂ ಕೆಲ್ಸದ್ದೇ ಚಿಂತೆ. ಇನ್ನೇನಾಗುತ್ತೆ.. ಚಿಂತೆ.. ಚಿಂತೆ... ತಲೆ ತುಂಬಾ ಚಿಂತೆ.. ಒತ್ತಡ.. ಎಲ್ಲಾ ಸೇರಿ ಇನ್ನೇನಾಗುತ್ತೆ.. ತಲೆಗೂದಲು ಉದುರಿ ತಲೆ ಬೋಳಾಗುತ್ತೆ.. ಪಾಪ .. ನಮ್ಮ  CA student  ಗಳ ಪಾಡು .. ನಾಯಿ ಪಾಡು..! ಇನ್ನು ಈತ  CA final year  ನಲ್ಲಿ ಓದ್ತಾ ಇದ್ದಾನೆ. ಆದ್ರೆ ಈತನ ತಲೆ ನೋಡಿ.. ಹೇಗೇ ಬೋಳಾಗಿದೆ..
ಬನ್ನಿ .. ಈಗೊಂದು ಬ್ರೇಕ್.

[ 10 ನಿಮಿಷಗಳ ಬ್ರೇಕ್ ನಲ್ಲಿ ಬೋಳುತಲೆಯಲ್ಲಿ ಕೂದಲು ಬರಿಸೋ ಆಮ್ಲ, ತೈಲಗಳ ಜಾಹೀರಾತುಗಳೇ]
[ನಂತರ ನಮ್ಮ ಮಿಸ್. ಸಬೀತಾ ಹಾಜರ್. ಅದೇ ಡಾಕ್ಟರ್ ವೇಷದಲ್ಲಿ ಸ್ಕೆತಾಸ್ಕೋಪ್ ಅಲ್ಲಾಡಿಸುತ್ತಾ...]
ವಿಕ್ಷಕರೇ.. ಈಗ ನಿಮಗೆಲ್ಲಾ ಗೊತ್ತಾಯ್ತಲ್ಲಾ.. ತಲೆ ಕೂದಲು ಉದುರುವ ರಹಸ್ಯ. ಬನ್ನಿ.. ನಮ್ಮ ಡಾಕ್ಟರ್| ನರಹರಿ ತಲೆಬಾಗ್ಲು ರವರು ನಮ್ಮ ಜೊತೆ ಇದ್ದಾರೆ. ಅವರನ್ನೇ ಕೇಳೋಣ..!
ಮಿಸ್. ಸಬೀತಾ (ಸ್ಕೆತಾಸ್ಕೋಪ್ ಅಲ್ಲಾಡಿಸುತ್ತಾ): ಡಾಕ್ಟರ್ .. ನೋಡಿದ್ರರಲ್ಲಾ...  CA student  ನ ತಲೆ ಕೂದಲು ಉದುರಿ ತಲೆಯೆಲ್ಲಾ ಬೋಳಾಗಿರೋದನ್ನು ನೀವೇ ನೋಡ್ರಿದ್ರರಲ್ಲಾ.. ಇದಕ್ಕೇನು ಕಾರಣ ಸ್ವಲ್ಪ ಹೇಳ್ತೀರಾ ಡಾಕ್ಟರ್.
ಡಾಕ್ಟರ್: ನರಹರಿ: ನೋಡಿ ಮಿ. ಸಬೀತಾ,  Over pressure  ಅತಿಯಾದ ಒತ್ತಡ, ವಿಶ್ರಾಂತಿಯಿಲ್ಲದ ದಿನಚರಿ, ಆಧುನಿಕ ಪಾಸ್ಟ್‍ಫುಡ್.. ಇವೆಲ್ಲವುಗಳ ಮಿಶ್ರಣವೇ ಈವತ್ತಿನ ಈ ತಲೆ ಉದುರುವುದರ ಮೂಲ.
ಮಿಸ್. ಸಬೀನಾ (ಸ್ಕೆತಾಸ್ಕೋಪ್ ಅಲ್ಲಾಡಿಸುತ್ತಾ): ಹಾಗಾದ್ರೆ ಡಾಕ್ಟರ್, ಈ ತಲೆ ಉದುರುವುದನ್ನು ನಿಲ್ಲಿಸುವುದಕ್ಕೆ ಏನು ಔಷಧಿಯೇ ಇಲ್ವೇ.. ?
ಡಾಕ್ಟರ್. ನರಹರಿ:  ಇಲ್ಲಾ ಮೇಡಮ್. ನಿಯಮಿತವಾದ ಮಿತಭೋಜನ, ಸಮಯಕ್ಕೆ ತಕ್ಕಂತೆ ವಿಶ್ರಾಂತಿ, ಒತ್ತಡರಹಿತವಾದ ಜೀವನವೇ ಇದಕ್ಕಿರುವ ಔಷಧ..!!

ಮಿಸ್. ಸಬೀನಾ (ಸ್ಕೆತಾಸ್ಕೋಪ್ ಅಲ್ಲಾಡಿಸುತ್ತಾ): ಹಾಗಾದ್ರೆ.. ವೀಕ್ಷಕರೇ.. ಕೇಳಿದ್ರರಲ್ಲಾ.. ಈ ತಲೆಕೂದಲು ಯಾಕ್ ಉದುರುತ್ತೆ. ಅದಕ್ಕಿರುವ ಪರಿಹಾರಗಳು ಎಲ್ಲಾ ಕೇಳಿದ್ರರಲ್ಲಾ.. ಬನ್ನಿ.. ಇನ್ನು ಉಳಿದ ವಿಷಯಗಳನ್ನು ತಿಳಿದುಕೊಳ್ಳೋಣ ಈ ಬ್ರೇಕ್‍ನ ನಂತರ...

[ಮತ್ತೆ ೧೦ ನಿಮಿಷಗಳ ಕಾಲ .. ಬೋಳುತಲೆಯಲ್ಲಿ ಕೂದಲು ಬರಿಸುವ ಆಮ್ಲ, ತೈಲಗಳ ಜಾಹೀರಾತುಗಳ ಹಾವಳಿ]
[ಹತ್ತು ನಿಮಿಷಗಳ ನಂತರ ಮತ್ತೆ.. ನಮ್ಮ ನಾರಾಯಣ ಸ್ವಾಮೀ ಮುಲುಗುತ್ತಾ, ಮುಕ್ಕುತ್ತಾ ಹಾಜರ್]

ವೀಕ್ಷಕರೇ.. ನೋಡಿದ್ರರಲ್ಲಾ.. ಇಷ್ಟು ಚಿಕ್ಕ ವಯಸ್ಸಿನಲ್ಲೇ.. ಅದೂ ಮದುವೆಯಾಗದ ಇನ್ನೂ ವಿದ್ಯಾರ್ಥಿ ಜೀವನದಲ್ಲೇ ತಲೆಕೂದಲು ಯಾಕೆ ಉದುರುತ್ತೆ ಅನೋದು ನಿಮಗೆ ಗೊತ್ತಾಯ್ತಲ್ಲಾ.. ಇದೇ ತರಹದ ವಿಚಿತ್ರ, ವಿಶಿಷ್ಟ ಸುದ್ಧಿಗಳಿಗಾಗಿ ವೀಕ್ಷಿಸಿ.. ಹೀಗೂ ಉಂಟೆ... ನಿಮ್ಮ  Tv9  ನಲ್ಲಿ..!

 (ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ಧೇಶವಿಲ್ಲ. ಯಾರಿಗಾದರೂ ನೋವುಂಟಾಗಿದ್ದರೆ ಅದಕ್ಕು ನಮಗೂ ಯಾವುದೇ ಸಂಬಂಧವಿಲ್ಲ..)

 CA SHIVA SHANKARA R. SHETTY
CHARTERED ACCOUNTANT
Mobile: +91 9035846043 Email: ca.srshetty@icai.org
www.casrshetty228359.in
  





No comments: